ಪಿಯುಸಿ ಆದವರಿಗೆ ಪರೀಕ್ಷೆಯಿಲ್ಲದೆ Zilla ಪಂಚಾಯಿತಿ ಕೆಲಸ: ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ

Job Update

ಪಿಯುಸಿ ಮುಗಿಸಿ ಸ್ವಂತ ಊರಿನಲ್ಲೇ ಗೌರವಾನ್ವಿತ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಹಂಬಲ ನಿಮ್ಮದಾಗಿದ್ದರೆ ನಿಮಗೊಂದು ಭರ್ಜರಿ ಸಿಹಿಸುದ್ದಿ. ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ‘ಕರವಸೂಲಿಗಾರ’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೆ ನೇರ ಆಯ್ಕೆ ನಡೆಯಲಿದೆ. ಪಿಯುಸಿ ಆದವರಿಗೆ ಪರೀಕ್ಷೆಯಿಲ್ಲದೆ Zilla ಪಂಚಾಯಿತಿ ಕೆಲಸ: ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಫ್ರೀಲಾನ್ಸ್ ಹುದ್ದೆಗಳುClick Here

ಹುದ್ದೆಯ ವಿವರ:

ನೇಮಕಾತಿ ಸಂಸ್ಥೆರಾಯಚೂರು ಜಿಲ್ಲಾ ಪಂಚಾಯತ್
ಹುದ್ದೆಯ ಹೆಸರುಕರವಸೂಲಿಗಾರ (Tax Collector)
ಒಟ್ಟು ಹುದ್ದೆಗಳು31 (8 ತಾಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ)
ಉದ್ಯೋಗ ಸ್ಥಳರಾಯಚೂರು ಜಿಲ್ಲೆ

ಶೈಕ್ಷಣಿಕ ಅರ್ಹತೆ ಮತ್ತು ಮುಖ್ಯ ಷರತ್ತುಗಳು:

  • ವಿದ್ಯಾರ್ಹತೆ: ಅಭ್ಯರ್ಥಿಗಳು ಕನ್ನಡವನ್ನು ಪ್ರಮುಖ ಭಾಷೆಯಾಗಿ ಅಭ್ಯಾಸ ಮಾಡಿ ಪಿಯುಸಿ (PUC/10+2) ಅಥವಾ ತತ್ಸಮಾನ (CBSE/ICSE, NIOS, 3 ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ, 2 ವರ್ಷದ ITI) ತೇರ್ಗಡೆಯಾಗಿರಬೇಕು.
  • ಕಂಪ್ಯೂಟರ್ ತರಬೇತಿ: ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 3 ತಿಂಗಳ ಕಂಪ್ಯೂಟರ್ ತರಬೇತಿ ಪಡೆದ ಪ್ರಮಾಣಪತ್ರ ಕಡ್ಡಾಯ.
  • ಸ್ಥಳೀಯರಿಗೆ ಮೊದಲ ಆದ್ಯತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಶಾಶ್ವತ ನಿವಾಸಿಯಾಗಿರಬೇಕು. ಇತರ ಜಿಲ್ಲೆ ಅಥವಾ ಹೊರಗಿನ ಪಂಚಾಯಿತಿ ಅಭ್ಯರ್ಥಿಗಳಿಗೆ ಅವಕಾಶವಿರುವುದಿಲ್ಲ.

ವಯೋಮಿತಿ ಅರ್ಹತೆ (ಕನಿಷ್ಠ 18 ವರ್ಷ)

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ಗರಿಷ್ಠ 43 ವರ್ಷ
  • SC, ST ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷ (ಮಾಜಿ ಸೈನಿಕರಿಗೆ +3 ವರ್ಷ ಹಾಗೂ ವಿಕಲಚೇತನರಿಗೆ +10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ)

ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ

  • ಸಾಮಾನ್ಯ ವರ್ಗ: ₹500
  • ಪ್ರವರ್ಗ 2A, 2B, 3A, 3B: ₹300
  • SC, ST, ಪ್ರವರ್ಗ-1 ಮತ್ತು ಮಾಜಿ ಸೈನಿಕರು: ₹200
  • ವಿಶೇಷ ಚೇತನ ಅಭ್ಯರ್ಥಿಗಳು: ₹100

ಶುಲ್ಕವನ್ನು ನೇರವಾಗಿ SBI ಶಾಖೆಯಲ್ಲಿ ‘ZP GENERAL ACCOUNTS’ (ಖಾತೆ ಸಂಖ್ಯೆ: 52075526994, IFSC: SBIN0020203, ಲಿಂಗಸೂಗೂರು ರಸ್ತೆ ಶಾಖೆ, ರಾಯಚೂರು) ಖಾತೆಗೆ ಪಾವತಿಸಿ, ಬ್ಯಾಂಕ್ ಚಲನ್ ರಶೀದಿಯನ್ನು ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ 20 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ03 ಸೆಪ್ಟೆಂಬರ್ 2026

ಪ್ರಮುಖ ಲಿಂಕ್‌ಗಳು:

Official NotificationClick Here
Apply OnlineClick Here
ಹೆಚ್ಚಿನ ಮಾಹಿತಿಗಾಗಿClick Here

ಸಾರಾಂಶ:

ಸ್ವಂತ ಊರಿನಲ್ಲೇ ಸರ್ಕಾರಿ ಸೇವೆ ಸಲ್ಲಿಸಲು ಬಯಸುವ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಕೊನೆಯ ಕ್ಷಣದ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ನಿಗದಿತ ದಿನಾಂಕ 03 ಸೆಪ್ಟೆಂಬರ್ 2026 ರೊಳಗೆ ಅರ್ಜಿ ಸಲ್ಲಿಸುವುದು ಸೂಕ್ತ.

Trending

Load More...